Skip to main content

Sarvadarshi Madhwa Sadhakaru - Sri Ramacharya Awadhani

Sri Ramachar H Awadhani
An inspirational Madhwa Sadhakaru
Inspirational Madhwa leaders







ಪ್ರತಿಭಾ ಸಂಪನ್ನ ಶ್ರೀ ರಾಮಾಚಾರ್ಯ ಅವಧಾನಿ ಮಣ್ಣೂರ
(ಕುಲಪತಿಗಳು, ರಘುನಾಥತೀರ್ಥ ಅಧ್ಯಯನಾಶ್ರಮ, ಕಲಬುರಗಿ)
A perfect Scholar Sri Ramacharya Huchacharya Awadhani - Mannur
(Dean, Sri Raghunathteerth Adhyanashrama, Kalaburagi)


ರಾಮೂ ಕಾಕಾ ಎಂದೇ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಚಿರಪರಿಚತರಾಗಿರುವ ಪಂ. ರಾಮಾಚಾರ್ಯ ಹುಚ್ಚಾಚಾರ್ಯರು 'ಅವಧಾನಿ' ಮನೆತನದ ಅಪ್ಪಟ ಅಪರಂಜಿ ಪ್ರತಿಭೆ. ಸಂಸ್ಕøತ, ಕನ್ನಡ, ಮರಾಠಿ, ಹಿಂದಿ ಭಾಷೆ ಬಲ್ಲವರು, ಸಕಲ ಶಾಸ್ತ್ರ ಪಾರಂಗತರು.
A scholar who is known to all generation madhwas across India and were well known as Ramukaka(Ramu-chacha). They are dimond of Awadhani family. The scholar had strong hold on Kannada, Marathi, Hindi, English(to an extent) and were well known for knowing most shastras and their deep meaning. They were guiding people to read all that is available to build good and correct knowledge.

ಮಣ್ಣೂರು ಮೂಲದ ರಾಮಾಚಾರ್ಯರದ್ದು ಪಂಡಿತ ಪರಂಪರೆ ಕುಟುಂಬ. ಮಣ್ಣೂರಿನಲ್ಲಿಯೂ ಅನೇಕ ಧಾರ್ಮಿಕ ಪರಂಪರೆಗೆ ಕಾರಣೀಭೂತರದ ಇವರು ತಾವಿದ್ದಲ್ಲಿ ತಮ್ಮ ಸುತ್ತಮುತ್ತ ಸದಾಕಾಲ ಭಗವನ್ನಾಮ ಸಂಕೀರ್ತನೆಯೇ ನಡೆಯಬೇಕು ಎಂದು ಸಂಕಲ್ಪಿಸಿದವರು, ಅದಕ್ಕೇ ಇವರಿದ್ದಲ್ಲಿ ಭಗವಂತನ ನಾಮ ಸಂಕೀರ್ತನೆಯೇ ಅನುರಣಿಸುತ್ತದೆ. 
Sri Ramacharya family was well known in Mannur village as "Family of Pandits". They did lots of support by forming formal development processes in Mannur. Let it be temple renovation, establishment of strong process for aaradhana, vidyaposhana, and recognizing scholars in Madhwa shastra. Wherever they lived they got known by people for "creating platforms for Madhwa adhyayana, Adhyapana that too free of cost". Even their followers got into such transformation and dedicated their effort towards Lord Nama Sankeerthana and devotion than anything else.

ಪಂಡಿತರ ಪರಂಪರೆಯ ಕುಟುಂಬದ ರಾಮಾಚಾರ್ಯರು ತಮ್ಮ ಜೀವನವನ್ನೆಲ್ಲ ಪುರಾಣ, ಶಾಸ್ತ್ರಪಾಠ, ಪ್ರವಚನಕ್ಕಾಗಿಯೇ ಮೀಸಲಿಟ್ಟವರು. ತಮ್ಮ ತಂದೆ ಹುಚ್ಚಾಚಾರ್ಯರು, ಉತ್ತರಾದಿ ಮಠಾಧೀಶರಾದ ಪ್ರಾತಃಸ್ಮರಣೀಯ ಶ್ರೀ ಸತ್ಯಪ್ರಮೋದ ತೀರ್ಥರಲ್ಲಿ ಅಧ್ಯಯನ ಮಾಡಿರುವ ರಾಚಾಮಾಚಾರ್ಯ ಅವಧಾನಿಯವರು  ಶಾಸ್ತ್ರಗಳಲ್ಲಿ, ಗುರುಹಿರಿಯರಲ್ಲಿ ಇಟ್ಟಂತಹ ಭಕ್ತಿ, ಶ್ರದ್ಧೆ ಅನುಕರಣೀಯ.
Sri Ramacharya Awadhani, dedicated their full life towards Adhyayana, Adhyapana, Shastra shravana,pathana/paathana. Their father Pt. Huchacharya Awadhani, were served Sri 1008 Sri Satyapramod teerth of Uttaradimath and studied Shastras through them. Thus they became transformational leader in Mannur village where learning shastra became practice of every madhwa family.

ಶ್ರೀ ಸತ್ಯಪ್ರಮೋದ ತೀರ್ಥರು, ಶ್ರೀ ವಿದ್ಯಾಮಾನ್ಯ ತೀರ್ಥರು, ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರೊಂದಿಗಿನ ಒಟಡಾನಟಿಂದ ತಮ್ಮ ಅಧ್ಯಯನ- ಅಧ್ಯಾಪನದ ಕ್ಷಿತಿಜ ವಿಸ್ತರಿಸಿಕೊಂಡಿರುವ 'ರಾಮೂಕಾಕಾ' ಸಮಾಜದಲ್ಲಿ ಧಾರ್ಮಿಕತೆ ನೆಲೆಸಬೇಕು ಎಂದು ನುಡಿಯುತ್ತ ಅದರಂತೆಯೇ ನಡೆಯುತ್ತಿದ್ದಾರೆ.
Sri Ramacharya Awadhani learned shastras under Sri 1008 Sri Satyapramod Teertharu, Sri Vidyamanya teertharu, and also Sri Satyatma Teertharu. Also, were well associated with all Dharmik, Adhyatmik activities like Vidwat-gosthi, Chaturmasa etc.

ತಮ್ಮ 87 ರ ಈ ಇಳಿ ವಯಸ್ಸಿನಲ್ಲಿಯೂ ನಿರಂತರ ಪಾಠಪ್ರವಚನಗಳಲ್ಲಿ ನಿರತರಾಗಿರುವ ರಾಮಾಚಾರ್ಯ ಅವಧಾನಿ ಅವರಿಗೆ ಅರಸಿಬಂದ ಪುರಸ್ಕಾರÀಗಳು, ಪ್ರಶಸ್ತಿಗಳು ಹಲವು. ಅವುಗಳಲ್ಲಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥರು ನೀಡಿರುವ ಅಧೋಕ್ಷಜ ಪುರಸ್ಕಾರ, ಭಂಡಾರಕೇರಿ ಶ್ರೀಗಳಿಂದ ಕೊಡಮಾಡಲ್ಪಟ್ಟಿರುವ ಪಂಡಿತ ರತ್ನ ಪುರಸ್ಕಾರ, ಉತ್ತರಾದಿ ಮಠದಿಂದ ನೀಡಲಾಗಿರವ ಧ್ಯಾನ ಪ್ರಮೋದ ಪುರಸ್ಕಾರಗಳು ಪ್ರಮುಖವಾದವುಗಳು.
Even at the age of 87 they were fully engaged with daily paatha-pravachana and adhyayana. they started receiving lots of awards from different Madhwa mathas like Pejawar, Bhandarkere & Uttaradimath.

ಉತ್ತರಾದಿ ಮಠದ ಪರಂಪರೆಯಲ್ಲಿ ಮೂಲರಾಮದೇವರನ್ನು ಪೂಜಿಸಿದ ಯತಿಗಳಾದ ರಘುನಾಥತೀರ್ಥರು ಆದ್ಯರಿಗೆ ಆದ್ಯತ್ವ ದಯಪಾಲಿಸಿದÀ ಮಹನೀಯರು. ಅಂತಹವರ ಹೆಸರಲ್ಲಿ ಕಲಬುರಗಿಯಲ್ಲಿ ಆರಂಭವಾಗಿರುವ ಆಶ್ರಮದಲ್ಲಿ ಪಂ. ರಾಮಾಚಾರ್ಯರ ಪಾಠ ಪ್ರವಚನ ದಶಕದಿಂದ ಸಾಗಿದೆ. ಕಲಬುರಗಿ ರಘುನಾಥ ತೀರ್ಥ ಆಶ್ರಮಕ್ಕೆ ಹೊಸತನ ನೀಡುವಲ್ಲಿ ಯಶ ಕಂಡಿದ್ದಾರೆ. ಧಾರ್ಮಿಕತೆಯ ವಾತಾವರಣ, ಮಾಹಿತಿ, ಮಂತ್ರ- ಸ್ತೋತ್ರ, ಪಾಠಗಳನ್ನರಿಸಿ ತಮ್ಮ ಬಳಿ ಬರುವ ಅಬಾಲವೃದ್ಧರಾದಿಯಾಗಿ ಎಲ್ಲರನ್ನು ಪ್ರೀತಿಯಿಂದ ಕಂಡು ಮಾತನಾಡಿಸುತ್ತ ಯೋಗಕ್ಷೇಮ ಕೇಳುತ್ತಲೇ ಅವರಲ್ಲಿ ಧಾರ್ಮಿಕತೆಯನ್ನು ಬಿತ್ತುವಲ್ಲಿ ರಾಮಾಚಾರ್ಯರು ಮಾಡುತ್ತಿರುವ ಕೆಲಸ ಎಲ್ಲರನ್ನೂ ಪುಲಕಿತರನ್ನಾಗಿಸುತ್ತದೆ.
The era at Sri Raghunath Teerth Gurukula of Kalaburagi. Sri Raghunath Teertharu of Uttaradimatha who did pooja of Sri Moolaramadevaru & they are the one who provided a title "aadya : means first" to a group of families and later they got it as surname itself. The Gurukula started in their name and Sri Ramacharya did contribute for running adhyatma activities for 10+ years here. Thus they became famous name in each family of Kalaburagi.

87 ವಸಂತಗಳನ್ನು ಕಂಡಿರುವ ರಾಮಾಚಾರ್ಯ ಅವಧಾನಿಯವರು ಇಂದಿಗೂ ಪಾದರಸದಂತೆ ಓಡಾಡಿಕೊಂಡಿದ್ದು ಸದಾ ಲವಲವಿಕೆಯಿಂದಲೇ ಬಂದವರಿಗೆಲ್ಲರಿಗೂ ಪಾಠ ಹೇಳುವ ಪರಿ ನಿಜಕ್ಕೂ ಆನಂದ ಉಂಟು ಉಂಟು ಮಾಡುತ್ತದೆ.
Their selfless services itself is submitted to lotus feet of Lord Sri Ramachandra. They never accepted any donations, gifts or even daana, rather they used to wear old cloths purchased from their money, travel through their own earned money and also they used to donate money that they get to some other person who is in need or some other scholar whom saints always bless. Such people are rare in society and are like dimonds in Madhwa society.

ಸತ್ಯಾತ್ಮತೀರ್ಥರ ಆಜ್ಞೆಯಂತೆಯೇ ಕಲಬುರಗಿಯಲ್ಲಿರುವ ಶ್ರೀ ರಘುನಾಥತೀರ್ಥ ಅಧ್ಯಯನಾಶ್ರಮದಲ್ಲಿ ತಾವಿದ್ದುಕೊಂಡು ಪಾಠಪ್ರವಚನ ನಡೆಸುತ್ತಿರುವ ಇವರು ಇಲ್ಲಿನ ಯಶಸ್ಸನ್ನೆಲ್ಲ  ಭಗವಂತನಿಗೆ, ಪರಮಹಂಸ ಪೀಠ ವಿರಾಜಮಾನ ಗುರುಗಳಿಗೆ ಅರ್ಪಿಸಿಬಿಡುತ್ತಾರೆ.

ಕಲಬುರಗಿಯಲ್ಲಿರುವ ಮೋಹನ್ ಲಾಡ್ಜ್ ಹಿಂಭಾಗದಲ್ಲಿರುವ ವಿಶಿಷ್ಟ ರಘುನಾಥತೀರ್ಥ ಅಧ್ಯಯನಾಶ್ರಮ ಈಗ ದಶಮಾನೋತ್ಸವ ಸಂಭ್ರಮದಲ್ಲಿದೆ. ಪಂಡಿತ ರಾಮಾಚಾರ್ಯ ಅವಧಾನಿ ಇಲ್ಲಿ ಆಸಕ್ತರಿಗೆ ಅವಿರತ ಪಾಠಪ್ರವಚನ ನಡೆಸುತ್ತಿದ್ದಾರೆ. ಭೀಮಾ ತೀರದ ಮಣ್ಣೂರು- ಕಾಗಿಣಾ ತೀರದ ಮಳಖೇಡದಂತಹ ಮಹಾನ್ ಸುಕ್ಷೇತ್ರಗಳ ಮಧ್ಯೆ ಇರುವ ಕಲಬುರಗಿ ನಗರದಲ್ಲಿಯೂ ಧಾರ್ಮಿಕ ಕಾರ್ಯಗಳು ಸದ್ದಿಲ್ಲದೆ ಸಾಗುತ್ತಿವೆ ಎನ್ನಲು ಇಲ್ಲಿನ ರಘುನಾಥತೀರ್ಥ ಅಧ್ಯಯನಾಶ್ರಮದ ಕೆಲಸಕಾರ್ಯಗಳೇ ಕನ್ನಡಿ.

ಕಲಬುರಗಿಯಲ್ಲಿ 2. 11. 2005 ರಂದು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥರೇ ತಮ್ಮ ಅಮೃತ ಹಸ್ತದಿಂದ ಈ ಆಶ್ರಮ ಉದ್ಘಾಟಿಸುವ ಮೂಲಕ ಕಲಬುರಗಿ ಆಸ್ತಿಕ ಭಕ್ತವೃಂದಕ್ಕೆ ಹರಸಿದ್ದರು. ಈ ಆಶ್ರಮದಲ್ಲಿಯೇ ಇದ್ದು ಆಸಕ್ತ ಭಕ್ತರಿಗೆಲ್ಲರಿಗೂ ನಿತ್ಯ ಪಾಠ ಹೇಳಬೇಕು, ಪ್ರವಚನಾದಿಗಳನ್ನು ಮಾಡುತ್ತಿರಬೇಕು ಎಂಬ ಸತ್ಯಾತ್ಮತೀರ್ಥರ ಸೂಚನೆಯಂತೆಯೇ ಪಂ. ರಾಮಾಚಾರ್ಯ ಅವಧಾನಿಯವರು ಇಲ್ಲಿಯೇ ಇದ್ದು ನಿರಂತರವಾಗಿ ಪಾಠಪ್ರವಚನಗಳನ್ನು ಮಾಡುತ್ತ ಸದ್ವಿಚಾರ, ಸುವಿಚಾರಗಳ, ಧಾರ್ಮಿಕತೆ, ಉತ್ತಮ ಚಿಂತನೆಗಳಿಂದ ತುಂಬಿರುವ ವಾತಾವರಣ ನಗರದಲ್ಲಿ ಪಸರಿಸಲು ಕಾರಣೀಭೂತರಾಗಿದ್ದಾರೆ.

ಲೇಖನ- ಶೇಷಮೂರ್ತಿ ಅವಧಾನಿ ಮಣ್ಣೂರ


 

Comments

  1. ಆಚಾರ್ಯರಿಗೆ ದಂಡವತ್ ಪ್ರಣಾಮಗಳು..ನಿಗರ್ವಿ,ತುಂಬಿದ ಕೊಡ ಆಚಾರ್ಯರು..ಹೀಗೊಂದು ಸವಿ ಸಂದರ್ಭದಲ್ಲಿ ನನಗೆ ಅವರಾಶೀರ್ವಾದ ದೊರೆತು ಧನ್ಯತೆ ಕಂಡಿದ್ದೇನೆ.ಬೆಟ್ಟಿಯಾದ ಸಂದರ್ಭದಲ್ಲಿ ಅವರು ಅತ್ಯಂತ ವಾತ್ಸಲ್ಯ ದಿಂದ"ಎಲ್ಲಾ ಆರಾಮ" ಎಂದು ಕೇಳುವುದೇ ಅವರ ಘನ ಆಶೀರ್ವಾದ.ಅವರು ೧೦೦ ರ ಗಡಿ ದಾಟಿ ಮುನ್ನುಗ್ಗಿ, ನಮ್ಮನ್ನು ಆಶೀರ್ವದಿಸುತ್ತಿರಲಿ. ಅವರು ಅಭಿಮಾನಿ..ಶೇಷಗಿರಿ ಬೀಡಕರ.

    .

    ReplyDelete

Post a Comment

Popular posts from this blog

Sarvadasrshi Sadhakiyaru - Madhwa Women Achievers

 Being a true Madhwa lady is as tough life style as a women CEO of large organization How is Kalibadhe to Women? Women been power of the community always, in the past, present and most importantly for future. If dharmik happy life has to be seen on this earth its possible only through brave women. Today with heavy influence of western culture, to be clear western Bad culture influence is much higher than influence of westerns good culture. The culture of cutting cake, waking up in midnight 12 and giving a gift/cake has become totally unavoidable. We are at peak of blind culture by people who said Dharma is blind belief!!! There are several life being sacrificed just because family did not agree to celebrate kids 1st birthday in hotel at the cost of 40-80,000. Women are under tremendous peer pressure today, applying kunkum, wearing mangalasutra has itself been a factor of being old-school-though person. People don't want to even show themselves as Madhwas, Brahmins or even married. ...

Madhwa Sadhakaru - Kashi Hanumantdaasaru

  ಕಾಶಿ ವಾಸಿಗಳಾಗಿ ಕಾಶಿಪುರಾಧೀಶನ ವಿಶೇಷ ಸೇವೆಯ ಹಲವು ವತ್ಸರ ಮಾಡುತ ವಿರಾಗಿ ಮಾಧವೇಶಾಚಾರ್ಯರ ಮುದದಿಂದ ಸೇವಿಸಿ ಪರಿಪರಿಯ ಕರುಣ ಪಡೆದಂಥ ಸತ್ಯಕಾಮ ಜಾಬಾಲಿಯೆ ನಿನ್ನ ಗೋ ಸೇವೆಯಿಂದ ಪ್ರೀತರಾಗಿ ಸುರರು ಬೋಧಿಸಿದರು ಬ್ರಹ್ಮಜ್ಞಾನವನು  ಎಂದು ಸ್ತುತಿಸಲ್ಪಟ್ಟವರು,  ಶ್ರೀ ರಾಯರ, ಶ್ರೀ ವಿಜಯಪ್ರಭುಗಳ ಅನುಗ್ರಹ ಪಡೆದು ಜ್ಞಾನಚಕ್ಷುಗಳಿಂದಲೇ  ಪರಮಾತ್ಮನನ್ನು ಕಂಡ ಪರಮ ಚೇತನರು,  ೨೪ ವರ್ಷಗಳ ಕಾಲ ಕಾಶಿಯಲ್ಲಿ ನೆಲಸಿ ಶ್ರೀ ರಾಮದುರ್ಗ ಮಾಧವೇಶಾಚಾರ್ಯರಿಂದ ಅನುಗ್ರಹಿಸಲ್ಪಟ್ಟು ಅವರಿಂದ ಶ್ರೀಮದ್ಭಾಗವತದ ಶ್ರವಣವನ್ನು ಮಾಡಿದ ಪರಮಭಾಗವತರು.  ಹರಿದಾಸ ಸಾಹಿತ್ಯದ ಸೆವೆಗೆ, ಹರಿದಾಸರ ಸೇವೆಗೆ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟವರು, ಶ್ರೀ ಮೊದಲಕಲ್ ಶೇಷದಾಸಾರ್ಯರ ಆರಾಧನೆಯಲ್ಲಿ ಭಕ್ತಿಯಿಂದ ಭಾಗವಹಿಸಿ ಸೇವೆ ಸಲ್ಲಿಸುತ್ತಿರುವ ಮಹಾನುಭಾವರು, ಅನೇಕ ಶಿಷ್ಯವರೇಣ್ಯರಿಗೆ ಅನುಗ್ರಹಮಾಡಿದವರು, ಪರಮಾತ್ಮನ ಸೇವೆಗೆ ದೇಹದ ಲೋಪಗಳು ಬಂಧಕಗಳಲ್ಲವೆಂದೇ ತೋರಿಸಿಕೊಡುವಂತೆ ಜೀವನವನ್ನು ನಡೆಸಿದ ಮಹಾನುಭಾವರಾದ , ಇಂದಿನ ಆರಾಧನಾನಾಯಕರಾದ ಶ್ರೀ ಕಾಶೀದಾಸರಿಗೆ ಶಿರಬಾಗಿ ನಮಸ್ಕಾರಗಳನ್ನು ಸಲ್ಲಿಸುತ್ತೆವೆ

Sarvadarshi Sadhakaru - Sri Indiresha Dasaru

ದಾಸರ ಹೆಸರು : ಇಂದಿರೇಶರು ಜನ್ಮ ಸ್ಥಳ    : ಶಿಕಾರಿಪುರ (ಶಿವಮೊಗ್ಗ ಜಿಲ್ಲೆ) ತಂದೆ ಹೆಸರು : ಶ್ರೀನಿವಾಸಾಚಾರ್ಯರು ತಾಯಿ ಹೆಸರು : ರುಕ್ಮಿಣೀಬಾಯಿ ಕಾಲ            : 1895 - 1939 ಅಂಕಿತನಾಮ : ಇಂದಿರೇಶ (ಸ್ವಪ್ನಾಂಕಿತ) ಲಭ್ಯ ಕೀರ್ತನೆಗಳ ಸಂಖ್ಯೆ: 860 ಗುರುವಿನ ಹೆಸರು : ಬಾಬಾಚಾರ್ಯ (ದೊಡ್ಡಪ್ಪ) ಆಶ್ರಯ        : ಕೊಲ್ಹಾಪುರದ ಅಂತಾಜಿಪಂತರು ಪೂರ್ವಾಶ್ರಮದ ಹೆಸರು : ಪಾಂಡುರಂಗಿ ಹುಚ್ಚಾಚಾರ್ಯರು (ತಿರುಪತಿ),  ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಸರ್ವಮೂಲ ಗ್ರಂಥಗಳಿಗೆ ಟಿಪ್ಪಣಿ, ಸುಧಾಟಿಪ್ಪಣಿ, ಉಪಾದಿಖಂಡನ ವ್ಯಾಖ್ಯಾನ, ತತ್ವನ್ಯಾಸ, ದ್ವಾದಶ ಸ್ತೋತ್ರ ವ್ಯಾಖ್ಯಾನ, ಕನ್ನಡದಲ್ಲಿ ದಶಮಸ್ಕಂಧ ಭಾಗವತ, ಸುಂದರಕಾಂಡ ಪತಿ: ಪತ್ನಿಯ ಹೆಸರು : ಹುಚ್ಚವ್ವ (ಅಕ್ಕನ ಮಗಳು) ಒಡಹುಟ್ಟಿದವರು : ಇಬ್ಬರು ಸಹೋದರರು ಒಬ್ಬ ಸೋದರಿ ಕಾಲವಾದ ಸ್ಥಳ ಮತ್ತು ದಿನ: 1939 ಪ್ರಮಾದಿ ಸಂತ್ಸರದ ಕಾರ್ತೀಕ ಬಹುಳ ಪಂಚಮಿ ಶುಕ್ರವಾರ, ತಿರುಮಲ ಕೃತಿಯ ವೈಶಿಷ್ಟ್ಯ: ಮಹಾಲಕ್ಷ್ಮೀ ಹಾಗೂ ಬಾಲಕೃಷ್ಣನ ಬಗೆಗೆ ಕುರಿತ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೃದ್ಯವಾಗಿದೆ. ಕೊನೆಗಾಲದಲ್ಲಿ ಕಣ್ಣು ಕಾಣದಿದ್ದರೂ ಮಾನಸಿಕವಾಗಿಯೇ ದೈವವನ್ನು ಪೂಜಿಸಿ, ಕೃತಿಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ 'ಲಕ್ಷ್ಮೀಶಶ...