ಕಾಶಿ ವಾಸಿಗಳಾಗಿ ಕಾಶಿಪುರಾಧೀಶನ
ವಿಶೇಷ ಸೇವೆಯ ಹಲವು ವತ್ಸರ ಮಾಡುತ
ವಿರಾಗಿ ಮಾಧವೇಶಾಚಾರ್ಯರ ಮುದದಿಂದ ಸೇವಿಸಿ
ಪರಿಪರಿಯ ಕರುಣ ಪಡೆದಂಥ
ಸತ್ಯಕಾಮ ಜಾಬಾಲಿಯೆ ನಿನ್ನ ಗೋ ಸೇವೆಯಿಂದ
ಪ್ರೀತರಾಗಿ ಸುರರು ಬೋಧಿಸಿದರು ಬ್ರಹ್ಮಜ್ಞಾನವನು
ಎಂದು ಸ್ತುತಿಸಲ್ಪಟ್ಟವರು, ಶ್ರೀ ರಾಯರ, ಶ್ರೀ ವಿಜಯಪ್ರಭುಗಳ ಅನುಗ್ರಹ ಪಡೆದು ಜ್ಞಾನಚಕ್ಷುಗಳಿಂದಲೇ ಪರಮಾತ್ಮನನ್ನು ಕಂಡ ಪರಮ ಚೇತನರು, ೨೪ ವರ್ಷಗಳ ಕಾಲ ಕಾಶಿಯಲ್ಲಿ ನೆಲಸಿ ಶ್ರೀ ರಾಮದುರ್ಗ ಮಾಧವೇಶಾಚಾರ್ಯರಿಂದ ಅನುಗ್ರಹಿಸಲ್ಪಟ್ಟು ಅವರಿಂದ ಶ್ರೀಮದ್ಭಾಗವತದ ಶ್ರವಣವನ್ನು ಮಾಡಿದ ಪರಮಭಾಗವತರು. ಹರಿದಾಸ ಸಾಹಿತ್ಯದ ಸೆವೆಗೆ, ಹರಿದಾಸರ ಸೇವೆಗೆ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟವರು, ಶ್ರೀ ಮೊದಲಕಲ್ ಶೇಷದಾಸಾರ್ಯರ ಆರಾಧನೆಯಲ್ಲಿ ಭಕ್ತಿಯಿಂದ ಭಾಗವಹಿಸಿ ಸೇವೆ ಸಲ್ಲಿಸುತ್ತಿರುವ ಮಹಾನುಭಾವರು, ಅನೇಕ ಶಿಷ್ಯವರೇಣ್ಯರಿಗೆ ಅನುಗ್ರಹಮಾಡಿದವರು, ಪರಮಾತ್ಮನ ಸೇವೆಗೆ ದೇಹದ ಲೋಪಗಳು ಬಂಧಕಗಳಲ್ಲವೆಂದೇ ತೋರಿಸಿಕೊಡುವಂತೆ ಜೀವನವನ್ನು ನಡೆಸಿದ ಮಹಾನುಭಾವರಾದ , ಇಂದಿನ ಆರಾಧನಾನಾಯಕರಾದ ಶ್ರೀ ಕಾಶೀದಾಸರಿಗೆ ಶಿರಬಾಗಿ ನಮಸ್ಕಾರಗಳನ್ನು ಸಲ್ಲಿಸುತ್ತೆವೆ
Comments
Post a Comment