ದಾಸರ ಹೆಸರು : ಇಂದಿರೇಶರು
ಜನ್ಮ ಸ್ಥಳ : ಶಿಕಾರಿಪುರ (ಶಿವಮೊಗ್ಗ ಜಿಲ್ಲೆ)
ತಂದೆ ಹೆಸರು : ಶ್ರೀನಿವಾಸಾಚಾರ್ಯರು
ತಾಯಿ ಹೆಸರು : ರುಕ್ಮಿಣೀಬಾಯಿ
ಕಾಲ : 1895 - 1939
ಅಂಕಿತನಾಮ : ಇಂದಿರೇಶ (ಸ್ವಪ್ನಾಂಕಿತ)
ಲಭ್ಯ ಕೀರ್ತನೆಗಳ ಸಂಖ್ಯೆ: 860
ಗುರುವಿನ ಹೆಸರು : ಬಾಬಾಚಾರ್ಯ (ದೊಡ್ಡಪ್ಪ)
ಆಶ್ರಯ : ಕೊಲ್ಹಾಪುರದ ಅಂತಾಜಿಪಂತರು
ಪೂರ್ವಾಶ್ರಮದ ಹೆಸರು : ಪಾಂಡುರಂಗಿ ಹುಚ್ಚಾಚಾರ್ಯರು (ತಿರುಪತಿ),
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಸರ್ವಮೂಲ ಗ್ರಂಥಗಳಿಗೆ ಟಿಪ್ಪಣಿ, ಸುಧಾಟಿಪ್ಪಣಿ, ಉಪಾದಿಖಂಡನ ವ್ಯಾಖ್ಯಾನ, ತತ್ವನ್ಯಾಸ, ದ್ವಾದಶ ಸ್ತೋತ್ರ ವ್ಯಾಖ್ಯಾನ, ಕನ್ನಡದಲ್ಲಿ ದಶಮಸ್ಕಂಧ ಭಾಗವತ, ಸುಂದರಕಾಂಡ
ಪತಿ: ಪತ್ನಿಯ ಹೆಸರು : ಹುಚ್ಚವ್ವ (ಅಕ್ಕನ ಮಗಳು)
ಒಡಹುಟ್ಟಿದವರು : ಇಬ್ಬರು ಸಹೋದರರು ಒಬ್ಬ ಸೋದರಿ
ಕಾಲವಾದ ಸ್ಥಳ ಮತ್ತು ದಿನ: 1939 ಪ್ರಮಾದಿ ಸಂತ್ಸರದ ಕಾರ್ತೀಕ ಬಹುಳ ಪಂಚಮಿ ಶುಕ್ರವಾರ, ತಿರುಮಲ
ಕೃತಿಯ ವೈಶಿಷ್ಟ್ಯ: ಮಹಾಲಕ್ಷ್ಮೀ ಹಾಗೂ ಬಾಲಕೃಷ್ಣನ ಬಗೆಗೆ ಕುರಿತ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೃದ್ಯವಾಗಿದೆ. ಕೊನೆಗಾಲದಲ್ಲಿ ಕಣ್ಣು ಕಾಣದಿದ್ದರೂ ಮಾನಸಿಕವಾಗಿಯೇ ದೈವವನ್ನು ಪೂಜಿಸಿ, ಕೃತಿಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ 'ಲಕ್ಷ್ಮೀಶಶೋಭಾನ'ವು ಶತಕ ರೂಪದ ಸಾಂಗತ್ಯ ಧಾಟಿಯಲ್ಲಿದ್ದು, ವಾದಿರಜರ ಲಕ್ಷ್ಮೀಶೋಭಾನ ಕ್ಕಿಂತ ಇದು ತುಸು ಭಿನ್ನವಾಗಿದೆ.
ಇಂದಿರೇಶ ಅಂಕಿತಸ್ಥರಾದ ಶ್ರೀ ತಿರುಪತಿ ಪಾಂಡುರಂಗೀ ಹುಚ್ಚಾಚಾರ್ಯ
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ರುಕ್ಮಿಣೀ ಜನನೀಯಸ್ಯ/ ಶ್ರೀನಿವಾಸಸ್ತು ಯತ್ಪಿತಾ/
ಯೋ ಪಾಂಡುರಂಗೀ ವಂಶೀಯಃ/ ತಂ ವಂದೇ ಸದ್ಗುರುಂ ಮಮ//
ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದ,
ಶ್ರೀ ಕೃಷ್ಣನನ್ನು ಮಗುವಂತೆ ಪ್ರತೀದಿನ ಕಾಣಿದಂತಹಾ, ಮಹಾಲಕ್ಷ್ಮೀ ದೇವಿಯರನ್ನು ಒಲಿಸಿಕೊಂಡಂತಹಾ, ಶ್ರೀನಿವಾಸದೇವರ ಕಲ್ಯಾಣವನ್ನು ಸದಾ ಬಿಡದೇ ಮಾಡಿದಂತಹಾ, ನರಸಿಂಹ ದೇವರ ಆರಾಧನೆ ಸದಾ ಮಾಡಿದವರಾದ, ಮಾನಸಪೂಜಾವಿಧಾನ,ತತ್ವ ಸಂಖ್ಯಾನದ ಸ್ತೋತ್ರ, ಪಾಪಪುರುಷ ವಿಸರ್ಜನೆ,ಅಧಿಷ್ಟಾನಗತ ಭಗವದ್ರೂಪಗಳ ವರ್ಣನೆ, ಪುರಂದರದಾಸಾರ್ಯರ ಸ್ತುತಿ, ಇತ್ಯಾದಿ ಶ್ರೇಷ್ಠ ಕೃತಿಗಳಿಂದ ದಾಸ ಸಾಹಿತ್ಯ ಸೇವೆಯನ್ನು ಇನ್ನೂ ಅನೇಕ ಅದ್ಭುತ ಪದ ಪದ್ಯಗಳ, ಸ್ತೋತ್ರಗಳನ್ನು ಸಂಸ್ಕೃತ ಭಾಷೆಯಲ್ಲಿ, ಪ್ರಾಕೃತದಲ್ಲಿ ನಮಗೆ ನೀಡಿದಂತಹಾ ನಾರದರಿಂದ, ಸ್ವಪ್ನದಲ್ಲಿ ಅಂಕಿತಪಡೆದ ದಾಸ ಶ್ರೇಷ್ಠರಾದ ಇಂದಿರೇಶ ಅಂಕಿತಸ್ಥರಾದ ಶ್ರೀ ತಿರುಪತಿ ಪಾಂಡುರಂಗೀ ಹುಚ್ಚಾಚಾರ್ಯರ ಆರಾಧನಾ ಮಹೋತ್ಸವ ಇಂದಿನಿಂ
ಶ್ರೀ ದಾಸರಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀ ವೆಂಕಟೇಶನು ನಮ್ಮ ಎಲ್ಲರ ಮೇಲೆ ಅನುಗ್ರಹವನ್ನು ತೋರುವಂತಾಗಲೀ ಅವರ ಸೇವೆಯ ಮಾಡುವ ಮುಖಾಂತರ ಎಂದು ಪ್ರಾರ್ಥನೆ ಮಾಡುತ್ತಾ ....
ಶ್ರೀ ಬೆಟ್ಟದ ಆಚಾರ್ಯರ ಸ್ಮರಣೆ
ತಾಯಿ ಲಕ್ಷ್ಮೀದೇವಿಯರ ಅನುಗ್ರಹ ಬಹಳ ಇದೆ ಶ್ರೀ ದಾಸಾರ್ಯರ ಮೇಲೆ..
ಮತ್ತೊಂದೆರಡು ಸಂದರ್ಭಗಳನ್ನು ಸ್ಮರಿಸುತ್ತಾ..
ಪರಮಾತ್ಮನ ಲೋಚನಗಳ ಚಿಂತನೆಯೊಂದಿಗೆ ಒಳಗಣ್ಣು ತೆರಿಸೆಂದು ಬೇಡುವ ಪರಿ
ಇಂದಿರೇಶ ಅಂಕಿತಸ್ಥರಾದ
ಶ್ರೀ ಪಾಂಡುರಂಗಿ ಹುಚ್ಚಾಚಾರ್ಯರ ಪದ ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬ ಪದದ ಸಂದರ್ಭವೂ ಅದ್ಭುತ..
ಕೃತಿಯ ಸಂದರ್ಭ ಬಹಳ ರೋಚಕವಾಗಿದೆ.. ನಾವೆಲ್ಲಾ ಸಹಾ
ವಯೋವೃದ್ಧರಾದಾಗ ಈ ಪ್ರಾಕೃತ ದೇಹ ಸಂಬಂಧ ಸಮಸ್ಯೆಗಳನ್ನು ಅನುಭವಿಸಲೇ ಬೇಕಲ್ಲವೇ?.
ಸದಾ ಪರಮಾತ್ಮನ ಧ್ಯಾನಾದಿಗಳಲ್ಲಿ ಇರುವವರಿಗೆ ಒಳಗಣ್ಣಿನ ಶಕ್ತಿ ಇದ್ದರೆ ಸಾಕು, ಹೊರಗಣ್ಣಿನ ಚಿಂತೆಯೇ ಬೇರೇ ಇರ್ತದೆ. ಜ್ಞಾನಿಗಳ ಒಳಗಣ್ಣಿನ ಚಿಂತನೆಯೇ ಬೇರೆ ಇರ್ತದೆ...
ಶ್ರೀ ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು, ಶ್ರೀ ಕಾಶೀದಾಸರೂ ಕಣ್ಣುಗಳು ಕಾಣದಿದ್ದರೂ ಪರಮಾತ್ಮನನನ್ನು ಕಂಡಂತಹ ಮಹಾನುಭಾವರಲ್ಲವೆ?
ಒಳಗಣ್ಣಿನಿಂದ ಪರಮಾತ್ಮನನ್ನು ಕಾಣುವುದೇ ಮಹಾನುಭಾವರ ಚರ್ಯೆಯಾಗಿದೆ.. ಈ ಮಾತು ನಮ್ಮ ಶ್ರೀ ಹುಚ್ಚಾಚಾರ್ಯರ ವಿಷಯದಲ್ಲಿ ಪರಮಸತ್ಯವೂ ಹೌದು...
ಶ್ರೀ ದಾಸಾರ್ಯರು ಪ್ರತೀದಿನ ಅತಿಥಿ ಅಭ್ಯಾಗತರಿಗೆ ಸೇವೆಯನ್ನು ಮಾಡುತ್ತಿರುವವರು.. ಹೀಗೆ ಒಮ್ಮೆ ಬ್ರಾಹ್ಮಣರಿಗೆ ಅತಿಥಿ ಸತ್ಕಾರ ಮಾಡುವ ಸಂದರ್ಭದಲ್ಲಿ ,ಒಬ್ಬ ಬ್ರಾಹ್ಮಣರಿಗೆ ತೊವ್ವೆ ಬೇಕಾಗಿರ್ತದೆ, ಅವರಿಗೆ ಕೇಳಲು ಮುಜುಗರ, ಯಾರೂ ತೊವ್ವೆ ಬಡಿಸಲು ಅವರಕಡೇ ಬರ್ತಿಲ್ಲ... ಆಗ ಶ್ರೀ ಹುಚ್ಚಾಚಾರ್ಯರಿಗೂ ಕಣ್ಣು ಕಾಣುತ್ತಿರಲಿಲ್ವಂತೆ. ಆದರೆ ಅವರು ತಮ್ಮ ಜ್ಞಾನ ದೃಷ್ಟಿಯಿಂದ ವಿಷಯವನ್ನು ಗ್ರಹಿಸಿ ಆ ಬ್ರಾಹ್ಮಣನಿಗೆ ತೊವ್ವೆ ಬಡಿಸಲು ಹೇಳಿದರಂತೆ.. ಆಗ ಪರಮಾತ್ಮನ ಲೀಲೆಯನ್ನು ನೆನೆಯುತ್ತಾ ಹೊಗಳುತ್ತಾ ಹಾಡಿದ ,ಮಾಡಿದ ಕೃತಿಯೇ
ಹೊಸ ಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ
ಶ್ರೀ ದಾಸಾರ್ಯರ ಒಳಗಣ್ಣಿನ ಜ್ಞಾನ ಅಷ್ಟೇ ಪರಮಾತ್ಮನನ್ನ ನೋಡುವುದಾಗಿತ್ತು ಅನ್ನೋದು ಕೇಳಿದರೇನೇ ಕಣ್ತುಂಬಿ ಬರ್ತವು..
ಮತ್ತೊಂದು ಸಂದರ್ಭ...
ಶ್ರೀ ಹುಚ್ಚಾಚಾರ್ಯರು ಪ್ರತಿವರ್ಷ ವರಮಹಾಲಕ್ಷ್ಮೀದೇವಿಯರ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು. ಒಂದು ಸಲ ಹೀಗೆ ಹಬ್ಬ ಮುಗಿಸಿ ಉದ್ಯಾಪನೆ ಮಾಡುವಾಗ ತಾಯಿ ಲಕ್ಷ್ಮೀದೇವಿಯರ ಮುಖ ಆ ಕಡೆ ತಿರುಗಿಸಿಬಿಟ್ಟಳಂತೆ. ಆಗ ತಾಯಿಯ ಅನುಗ್ರಹವನ್ನು ಗಮನಿಸಿದ ಶ್ರೀ ಹುಚ್ಚಾಚಾರ್ಯರು - ಯಾಕೆ ತಾಯಿ ನಿನಗೆ ಈಗಾಗಲೆ ನಮ್ಮನ್ನು ಬಿಟ್ಟು ಹೋಗುವುದು ಇಷ್ಟವಿಲ್ಲವೆ? ನನ್ನ ಮೇಲೆ ಅದೆಷ್ಟು ಅನುಗ್ರಹ ಕಾರುಣ್ಯ ನಿನಗೆ ಎಂದು ಭಕ್ತಿಯಿಂದ ಪದೇ ಪದೇ ಸ್ತುತಿಸುತ್ತಾ ಇಡೀ ಶ್ರಾವಣಮಾಸ ಲಕ್ಷ್ಮೀದೇವಿಯರ ಪೂಜೆಯನ್ನು ಮಾಡಿದರಂತೆ, ಮುಂದಿನ ವರ್ಷಗಳಲ್ಲಿಯೂ ಅದೇ ಪದ್ಧತಿಯನ್ನು ಅನುಸರಿಸಿದ್ದರಂತೆ..
ಶ್ರೀ ಗುರುಗೋವಿಂದವಿಠಲರು ದಾಖಲಿಸಿದ ಮತ್ತೊಂದು ರೋಮಾಂಚನ ಘಟನೆ
ಶ್ರೀಮತ್ಪುರಂದರದಾಸಾರ್ಯರ ಆರಾಧನೆ ಶ್ರೀ ದಾಸಾರ್ಯರು ಬಹಳ ಭಕ್ತಿಯಿಂದ ಮಾಡುತ್ತಿದ್ದರು. ಹೀಗೊಂದು ಸಲ ಶ್ರೀಮತ್ಪುರಂದರದಾಸಾರ್ಯರ ಆರಾಧನೆಯನ್ನು ಹಂಪೆಯಲ್ಲಿನ ಪುರಂದರಮಂಟಪದಲ್ಲಿ ಶ್ರೀ ವಾಯಿಕರ್ ಕೃಷ್ಣಾಚಾರ್ಯರು ತಮ್ಮ ಆಧ್ವರ್ಯದಲ್ಲಿ ಮಾಡುತ್ತಿದ್ದರು. ಆರಾಧನೆಯ ಹಿಂದಿನ ದಿನ ನಮ್ಮ ವೆಂಕಪ್ಪ ಶ್ರೀ ದಾಸಾರ್ಯರ ಕನಸಿನಲ್ಲಿ ಬಂದು - ನನಗೆ ಹಂಪೆಯಲ್ಲಿ ಆರಾಧನೆಗೆ ಕರೆ ಬಂದದ. ನಾಳೆ ಬೆಳಿಗ್ಗೆ ಹತ್ತು ಗಂಟೆಯ ಒಳಗಡೆ ಪೂಜೆ, ನೈವೇದ್ಯಾದಿಗಳನ್ನು ಮುಗಿಸು ನಾ ಹೋಗುವುದಕ್ಕೆ ಸಿದ್ಧ ಮಾಡು ಅಂದನಂತೆ . ಮರುದಿನ ಶ್ರೀಮತ್ಪುರಂದರದಾಸಾರ್ಯರ ಆರಾಧನೆಯನ್ನು ಬೆಳಿಗ್ಗೆ ಹತ್ತರೊಳಗೆ ಮುಗಿಸಿರುತ್ತಾರೆ ಶ್ರೀ ಹುಚ್ಚಾಚಾರ್ಯರು.
ನಂತರ ದಿನಗಳಲ್ಲಿ ಶ್ರೀ ವಾಯಿ ಕೃಷ್ಣಾಚಾರ್ಯರು ತಿರುಪತಿಗೆ ಬಂದಾಗ ಶ್ರೀ ಹುಚ್ಚಾಚಾರ್ಯರ ಬಳಿ ಬಂದಿರುತ್ತಾರೆ. ಆ ಸಮಯಕ್ಕೆ ಶ್ರೀ ಹುಚ್ಚಾಚಾರ್ಯರಿಗೆ ಕಣ್ಣು ಕಾಣಿಸುತ್ತಿದ್ದಿಲ್ಲ. ಶ್ರೀ ವಾಯಿ ಆಚಾರ್ಯರು ಬಂದ ವಿಷಯ ಶಿಷ್ಯರು ತಿಳಿಸುತ್ತಾರೆ. ಆಗ ಶ್ರೀ ಹುಚ್ಚಾಚಾರ್ಯರಂತಾರೆ- ಏನು ಕೃಷ್ಣಾಚಾರ್ಯರೆ ನಮ್ಮ ವೆಂಕಪ್ಪನನ್ನು ಭೋಜನಕ್ಕೆ ಆಹ್ವಾನ ಮಾಡಿದ ಮಹಾನುಭಾವರು ನೀವು ಎಂದು ನಡೆದದ್ದು ಹೇಳಿದಾಗ ಶ್ರೀ ವಾಯಿ ಆಚಾರ್ಯರಂತಾರೆ- ನನಗೆ ಈ ವಿಷಯ ಗೊತ್ತಿರಲಿಲ್ಲ ಸ್ವಾಮಿ, ನನ್ನ ಭಾಗ್ಯವದು. ನಿಮಗೆ ಸ್ವಾಮಿ ದರ್ಶನ ಕೊಟ್ಟಿದ್ದಾನೆ. ನೀವು ಇನ್ನೆಷ್ಟು ಪುಣ್ಯವಂತರಲ್ಲವೆ ಎಂದು ಹೇಳುತ್ತಾರೆ. ಜ್ಞಾನಿಗಳ ಸಮಾಗಮದಲ್ಲಿ ನಾವು ಭಗವಂತನನ್ನು ಒಲಿಸಿಕೊಳ್ಳಬೇಕಾದರೆ ಇರಬೇಕಾದ ನಿಶ್ಚಲವಾದ ಭಕ್ತಿಯ ಚಿಂತನೆ ಕಾಣುತ್ತದೆ..
ಹೀಗೆ ನೋಡುತ್ತಾ ಹೋದರೆ ಅದೆಷ್ಟು ಸಂದರ್ಭಗಳು. ಎಲ್ಲವೂ ರೋಮಾಂಚನವಾದದ್ದೇ ಸರಿ..
ಇಂಥಹ ಘಟನೆಗಳು ಅದ್ಭುತ.. ಶ್ರೀ ಹುಚ್ಚಾಚಾರ್ಯರ ಜ್ಞಾನ ದೃಷ್ಟಿ ಗೆ ನಮೋ ಎನ್ನುತ್ತಾ..
ಪ್ರಾತಃಸ್ಮರಣೀಯರಾದ ಶ್ರೀ ಬೆಟ್ಟದ ಆಚಾರ್ಯರ ಅನುಗ್ರಹ ನಮಗೆ ಸದಾ ಇರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..
ವಿತ್ತ ವಿಚಾರ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಪಾಂಡುರಂಗಿ ಮನೆತನದ ಶ್ರೀನಿವಾಸಾಚಾರ್ಯರು ಮತ್ತು ರುಕ್ಮಿಣಿಬಾಯಿ ಅವರ ಪುತ್ರ ಹುಚ್ಚಾಚಾರ್ಯರು. ಅವರಿಗೆ ಶಿಕಾರಿಪುರದ ಪ್ರಾಣದೇವರ ಹೆಸರಿನಲ್ಲಿ ಹುಚ್ಚುರಾಯ ಎಂದು ನಾಮಕರಣವಾಯಿತು. ಬಾಲ್ಯದಿಂದಲೇ ಹುಚ್ಚಾಚಾರ್ಯರು ಅಧ್ಯಾತ್ಮದ ಕಡೆಗೆ ಹೆಚ್ಚು ವಾಲಿದ್ದರು. ಎಂಟನೆಯ ವಯಸ್ಸಿನಲ್ಲಿ ಉಪನಯನ, ಗಾಯಿತ್ರಿ ಉಪದೇಶಗಳಾದವು. ದೊಡ್ಡಪ್ಪ ಬಾಬಾಚಾರ್ಯರಿಂದ ಸಂಸ್ಕೃತ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಕೊಲ್ಲಾಪುರದಲ್ಲಿ ಮೂರು-ನಾಲ್ಕು ವರ್ಷಗಳಲ್ಲಿ ಈ ಬಾಲಕನಿಗೆ ಮಹಾ ಮಹೋಪಾಧ್ಯಾಯರಿಂದ ವ್ಯಾಕರಣ, ಸಾಹಿತ್ಯ ನ್ಯಾಯಶಾಸ್ತ್ರ,ನ್ಯಾಯ ಮುಂತಾದವುಗಳ ಪಾಠವಾಯಿತು. ಅಕ್ಕನ ಮಗಳು ಹುಚ್ಚವ್ವನೊಡನೆ ವಿವಾಹವಾಯಿತು. ಒಮ್ಮೆ ರಾಣೆಬೆನ್ನೂರಿನಲ್ಲಿ ನರಸಿಂಹನನ್ನು ಉಪಾಸಿಸುತ್ತಿರುವಾಗ ಸ್ವಪ್ನದಲ್ಲಿ ದೇವರ್ಷಿ ನಾರದರಿಂದ 'ಇಂದಿರೇಶ' ಅಂಕಿತ ಪ್ರದಾನವಾಯಿತು. ಇಂದಿರೇಶರು ಜ್ಞಾನ,ಭಕ್ತಿ,ವೈರಾಗ್ಯಗಳ ಸಾಕಾರ ಮೂರ್ತಿಯಾದ ಅಪ್ರತಿಮ ವೈದಿಕ ವಿದ್ವಾಂಸರಾದ ಹರಿದಾಸ ರಾಗಿದ್ದರು. ಇವರು ಸುಮಾರು 165 ಕೀರ್ತನೆಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ದೀರ್ಘ ಕೃತಿಗಳೂ ಇವೆ. ಇವರ 'ವಿತ್ತ ವಿಚಾರ' ಎನ್ನುವ ಒಂದು ಕೀರ್ತನೆಯಲ್ಲಿ ವಿತ್ತ ಎಂಬ ಪದವನ್ನು ಹಲವಾರು ಅರ್ಥಗಳಲ್ಲಿ ಬಳಸಿಕೊಂಡು ಕೃತಿಯನ್ನು ರಚಿಸಿದ್ದಾರೆ.
llವಿತ್ತದೊಳಗೆ ಹರಿ ಪತ್ನಿಯು ಕುಣಿಯುವಳುll
llವಿತ್ತದಿಂದಲಿ ಮಹಾಪತ್ತು ನಾಶಾll
llವಿತ್ತದಿಂದಲಿ ಸುವಿರಕ್ತಿ ಭಕ್ತಿ ಜ್ಞಪ್ತಿ ll
ಪರಮಪೂಜ್ಯ ಆಚಾರ್ಯರು ತಮ್ಮ ತಂದೆಯವರಲ್ಲಿಯೇ ಕಾವ್ಯ - ವ್ಯಾಕರಣ - ಕನ್ನಡ - ಆಂಗ್ಲ ಭಾಷೆಯನ್ನೂ ಅಧ್ಯಯನ ಮಾಡಿದರು.
" ಮನಃ ಪರಿವರ್ತನೆ "
ಆಂಗ್ಲ ವಿದ್ಯಾಭ್ಯಾಸವನ್ನು ಮುಂದೆವರೆಸಬೇಕೆಂಬ ಅಪೇಕ್ಷೆಯಿಂದ ಶಿವಮೊಗ್ಗಾಕ್ಕೆ ಬಂದರು.
ಕೈಯಲ್ಲಿ ಕಾಸಿಲ್ಲ - ಹಣವಿಲ್ಲದೆ ಆಂಗ್ಲ ವಿದ್ಯೆಯನ್ನು ಕಲಿಯಲು ಶಕ್ಯವಿಲ್ಲ.
ಆದುದರಿಂದ ಶಿವಮೊಗ್ಗಾದಲ್ಲಿ ಸಂಚಾರ ಮಾಡಿ ಹಣ ಕೂಡಿಸಿಕೊಂಡು ಆಂಗ್ಲ ವಿದ್ಯೆ ಕಲಿತು ಪದವೀಧರರಾಗಬೇಕೆಂದು ಅವರು ಯೋಚನೆ ಮಾಡಿದರು.
ಶಿವಮೊಗ್ಗಾದಲ್ಲಿ ಪಾಂಡುರಂಗಿ ಮನೆತನದ ಶಿಷ್ಯರಾದ ಮಾಸೂರವರು ವಾಸವಾಗಿದ್ದರು.
ಪೂಜ್ಯ ಆಚಾರ್ಯರು - ಮಾಸೂರು ನಾಯಕರಿಗೆ ತಮ್ಮ ಮುಂದಿನ ಕಾರ್ಯಕ್ರಮಗಳನ್ನು ತಿಳಿಸಿದರು.
ಆದರೆ ಪಾಂಡುರಂಗಿ ಮನೆತನದ ಮೇಲೆ ಶ್ರದ್ಧೆಯುಳ್ಳ ನಾಯಕರು - ಪೂಜ್ಯ ಆಚಾರ್ಯರ ಕೈಯಲ್ಲಿ ನೂರು ರೂಪಾಯಿ ಕೂಡಿಸಿಕೊಟ್ಟು ನಮಸ್ಕರಿಸಿ ಈ ರೀತಿ ಬಿನ್ನವಿಸಿದರು...
ಆಚಾರ್ಯರೇ...
ತಮ್ಮ ಮನೆತನ ದೊಡ್ಡ ಮನೆತನ.
ತಾವು ಆಂಗ್ಲ ಭಾಷೆ ಕಲಿಯುವುದಕ್ಕಿಂತ - ವೇದಾಂತವನ್ನು ಅಧ್ಯಯನ ಮಾಡಿ ಮಹಾ ಪಂಡಿತರಾಗಿ ದೇವತಾನುಗ್ರಹಕ್ಕೆ ಪಾತ್ರರಾಗಿ.
ನಿಮ್ಮ ತಪಃಶಕ್ತಿಯಿಂದ ನಮ್ಮಂಥಾ ಶಿಷ್ಯರನ್ನು ಉದ್ಧರಿಸಬೇಕು.
ನಿಮ್ಮ ಸಂಚಾರವೂ ಸಾಕು - ನಿಮ್ಮ ಆಂಗ್ಲ ವಿದ್ಯಾಧ್ಯಯನವೂ ಸಾಕು.
ಪೂಜ್ಯ ಆಚಾರ್ಯರಿಗೆ ಮಸೂರವರ ಮಾತು ಕೇಳಿ ಮನಃ ಪರಿವರ್ತನೆಯಾಯಿತು.
" ಪೂಜ್ಯ ಆಚಾರ್ಯರು ಕೊಲ್ಹಾಪುರ ಶ್ರೀ ಮಹಾಲಕ್ಷ್ಮೀ ಸನ್ನಿಧಾನದಲ್ಲಿ "....
ಕೊಲ್ಹಾಪುರದಲ್ಲಿ ಪೂಜ್ಯ ಆಚಾರ್ಯರು ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮೀದೇವಿಯರ ಸೇವೆಯನ್ನು ಅಚಲವಾಗಿ ಮನಸ್ಸಿನಿಂದ ಮಾಡ ತೊಡಗಿದರು.
ಕೊಲ್ಹಾಪುರದಲ್ಲಿ ಪ್ರಸಿದ್ಧರಾದ ವೈಯ್ಯಾಕರಣ ಪಂಡಿತರು ಇವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಸಂಪೂರ್ಣ ವ್ಯಾಕರಣ ಪಾಠಹೇಳಿದರು.
ಹೊಸಗಣ್ಣು ಎನಗೆ ಹಚ್ಚಲಿಬೇಕು
ಜಗದಂಬಾವಸುದೇವ
ಸುತನ ಕಾಂಬುವೆನು ।। ಪಲ್ಲವಿ ।।
ಘಸಣಿಯಾಗುವೆ ಭವ ವಿಷಯ
ವಾರುಧಿಯೊಳಗೆಶಶಿಮುಖಿಯೆ
ಕರುಣದಿ ಕಾಯೆ |।। ಅ ಪ ।।
ಪರರ ಅನ್ನವನುಂಡು ।
ಪರರ ಧನವನು ಕಂಡು ।
ಪರಿ ಪರಿಯ ಕ್ಲೇಶಗಳನುಂಡು ।।
ವರಲಕ್ಷ್ಮೀ ನಿನ್ನ ಚಾರು ।
ಚರಣಗಳ ಮೊರೆ ಹೊಕ್ಕೆ ।
ಕರುಣದಿ ಕಣ್ಣೆತ್ತಿ ನೋಡೆ ।। ಚರಣ ।।
ಮಂದಹಾಸವೇ ಭವ- ।
ಸಿಂಧುವಿನೊಳಗಿಟ್ಟು ।
ಚಂದವೇ ಎನ್ನ ನೋಡುವುದು ।।
ಕಂದನಂದದಿ ಬಾಲ್ಯ- ।
ದಿಂದ ಸೇರಿದೆ ನಿನ್ನ ।
ಮಂದರಧರನ ತೋರಮ್ಮ ।। ಚರಣ ।।
ಅಂದಚಂದಗಳೊಲ್ಲೆ ।
ಬಂಧು ಬಳಗ ಒಲ್ಲೆ ।
ಬಂಧನಕೆಲ್ಲ ಇವು ಕಾರಣವು ।।
ಇಂದಿರೇಶನ ಪಾದ ।
ದ್ವಂದ್ವವ ತೋರಿ । ಹೃ ।
ನ್ಮಂದಿರದೊಳು ಬಂದು ಬೇಗ ।। ಚರಣ ।।
ಜಗನ್ಮಾತೆಯ ಪರಮಾನುಗ್ರ ಹೊತ್ತು - ವಿಜಾಪುರ ಜಿಲ್ಲೆಯ ಬದಾಮಿ ತಾಲೂಕಿನ ಜಾಲಿಹಾಳ ಗ್ರಾಮಕ್ಕೆ ಬಂದು ಪಂಡಿತ ಶ್ರೀ ರಾಮಾಚಾರ್ಯರಲ್ಲಿ ನ್ಯಾಯ - ವೇದಾಂತವನ್ನು ಓದಿದರು.
ಪೂಜ್ಯ ಆಚಾರ್ಯರು ಜಾಲಿಹಾಳದಿಂದ ಕುರುಬಗಟ್ಟಿಗೆ ಬಂದು ವಿದ್ವಾನ್ ಶ್ರೀ ಬಾಬಾಚಾರ್ಯ ಪಾಂಡುರಂಗಿ ಅವರಲ್ಲಿ " ಶ್ರೀಮನ್ನ್ಯಾಯಸುಧಾ ಪರಿಮಳ - ಚಂದ್ರಿಕಾ - ನ್ಯಾಯಾಮೃತ - ತರ್ಕತಾಂಡವದೊಂದಿಗೆ ಸಮಗ್ರ ದ್ವೈತ ವೇದಾಂತವನ್ನು ಅಧ್ಯಯನ ಮಾಡಿದರು.
" ರಾಣೇಬೆನ್ನೂರಿಗೆ ಆಗಮನ "
ಪೂಜ್ಯ ಆಚಾರ್ಯರ ಪಾಂಡಿತ್ಯ - ತಪಃಶಕ್ತಿಯನ್ನು ಕಂಡು ರಾಣೆಬೆನ್ನೂರಿನ ಸಣ್ಣಪ್ಪ ನಾಯಕ ತಮ್ಮಲ್ಲೇ ಇರಬೇಕೆಂದು ಪ್ರಾರ್ಥಿಸಿಕೊಂಡಾಗ - ಪೂಜ್ಯ ಆಚಾರ್ಯರು ರಾಣೇಬೆನ್ನೂರಿಗೆ ಬಂದು ಸುಮಾರು 10 ವರ್ಷಗಳ ಜ್ಞಾನ ಸತ್ರ ಮಾಡಿದರು.
*
" ಶ್ರೀ ಇಂದಿರೇಶ - 2 "
" ಶ್ರೀ ಮೋಕ್ಷಪ್ರದನಾದ ಶ್ರೀ ನೃಸಿಂಹನ ಪರಮಾನುಗ್ರಹ "
ಪೂಜ್ಯ ಶ್ರೀ ಆಚಾರ್ಯರು ರಾಣೇಬೆನ್ನೂರಿನಿಂದ ಮುಗಟಖಾನ ಹುಬ್ಬಳ್ಳಿಗೆ ಬಂದು ಶ್ರೀ ನೃಸಿಂಹದೇವರ ಸನ್ನಿಧಿಯಲ್ಲಿ 12 ವರ್ಷಗಳ ಕಾಲ ನಿಂತು ತಪಸ್ಸು ಮಾಡಿ ಶ್ರೀ ನೃಸಿಂಹದೇವರ ಪರಮಾನುಗ್ರಕ್ಕೆ ಪಾತ್ರರಾಗಿ - ಅಲ್ಲಿಂದ ಬಾಗಲಕೋಟಿಗೆ ಬಂದು ಅಲ್ಲಿ ಗೃಹಸ್ಥರಿಗೆ ಕೆಲಕಾಲ ವೇದಾಂತ ಪಾಠ ಹೇಳಿ ಶ್ರೀ ಕ್ಷೇತ್ರ ತಿರುಪತಿಗೆ ಪಯಣ ಬೆಳೆಸಿದರು.
ಕರುಣದಿಂದ ಕರವ ಪಿಡಿಯೊ
ತೊರವಿ ನರಹರೆ ।। ಆಹಾ ।।
ತೊರವಿ ನರಹರೆ ।। ಪಲ್ಲವಿ ।।
ಶರಣಾಗತರಮಲ
ತೋರುವ ಕರುಣ
ವಾರಿಧೆ ।। ಅ ಪ ।।
ಸ್ತಂಭಜಾತ ನಂಬಿ ನಿನ್ನ ।
ಅಂಬುಜಾತನೆ ।
ಬಿಂಬದಂತೆ ಪಾಲಿಸೆನ್ನ ।
ಸಾಂಬವಿನುತನೆ ।। ಚರಣ ।।
ಛಟಿಛಟೆಂದು ಒಡೆದು ಕಂಬ ।
ಪುಟಿದು ಸಭೆಯೊಳು ।
ಕಟಿಯ ತಟದೊಳಿಟ್ಟು - ।
ರಿಪುವ ಒಡಲ ಬಗೆದೆಯೊ ।। ಚರಣ ।।
ಇಂದಿರೇಶ ಎನ್ನ ಹೃದಯ ।
ಮಂದಿರದೊಳು ।
ಬಂದು ತೋರೆ ಮುಖವ ನಿನ್ನ
ವಂದಿಸುವೆನು ।। ಚರಣ ।।
" ತಿರುಮಲೆಯ ಚಲುವ ಶ್ರೀ ಶ್ರೀನಿವಾಸನ ಸನ್ನಿಧಿಯಲ್ಲಿ ಪೂಜ್ಯ ಆಚಾರ್ಯರು "
ಪೂಜ್ಯ ಆಚಾರ್ಯರು ತಿರುಪತಿಯಲ್ಲಿದ್ದಾಗ ಬೆಟ್ಟದ ಮೇಲೆಯೇ ಒಂದು ಮನೆ ಮಾಡಿ ಶ್ರೀ ಶ್ರೀನಿವಾಸನ ಸೇವೇ ಮಾಡುತ್ತಾ ಸ್ಥಿರವಾಗಿ ಅಲ್ಲಿಯೇ ನಿಂತುಬಿಟ್ಟರು.
ಬೆಟ್ಟದ ಮೇಲೆ ಇದ್ದಾಗ ಶ್ರೀ ಶ್ರೀ ಶ್ರೀನಿವಾಸನ ದರ್ಶನಕ್ಕೆ ಬರುವ ಭಕ್ತರಿಗೆಲ್ಲಾ ಪೂಜ್ಯ ಶ್ರೀ ಆಚಾರ್ಯರ ಮನೆಯಲ್ಲೇ ವ್ಯವಸ್ಥೆ ಮಾಡಿದ್ದರು.
ಶ್ರೇಷ್ಠ ವಿದ್ವಾಂಸರನ್ನೂ - ಶಿಷ್ಟ ಬ್ರಾಹ್ಮರನ್ನು ತಾವೇ ಸ್ವತಃ ಮನೆಗೆ ಕರೆತಂದು ಊಟಕ್ಕೆ ಹಾಕಿ ಸತ್ಕರಿಸಿ ಕಳುಹಿಸುತ್ತಿದ್ದರು.
ಇಂದಿಗೂ ಕರ್ನಾಟಕ - ಆಂಧ್ರ - ಮಹಾರಾಷ್ಟ್ರದಲ್ಲಿ ಪೂಜ್ಯ ಆಚಾರ್ಯರ ಭಕ್ತ ಜನ ಬಹು ಸಂಖ್ಯೆಯಲ್ಲಿ ಇದ್ದಾರೆ.
ತಿರುಪತಿಯಲ್ಲಿ ಪೂಜ್ಯ ಆಚಾರ್ಯರ ಜ್ಞಾನ ಸತ್ರ - ಅನ್ನ ಸತ್ರ ಅಖಂಡ 35 ವರ್ಷಗಳ ಕಾಲ ನಿರಾತಂಕವಾಗಿ ನಡೆದವು.
ತಿರುಮಲೆಯ ಶ್ರೀ ಶ್ರೀನಿವಾಸನ ದೇವಸ್ಥಾನದ ಮಹಾಂತನು ಪೂಜ್ಯ ಆಚಾರ್ಯರ ಶಿಷ್ಯನಾಗಿ ಅವರು ಹೇಳಿದಂತೆ ಕೇಳುತ್ತಿದ್ದನು.
ಪೂಜ್ಯ ಶ್ರೀ ಆಚಾರ್ಯರು ಶಾಪಾನುಗ್ರಹ ಸಮರ್ಥರೆಂದು ಜನರಲ್ಲಿ ವಿಶ್ವಾಸ ಇದ್ದಿತು.
ಅವರು ಆಡಿದ ಮಾತು ಹುಸಿ ಹೋಗಲಿಲ್ಲ - ಮಾಡಿದ ಕಾರ್ಯ ವ್ಯರ್ಥವಾಗಲಿಲ್ಲ.
ಬಿಡು ಎನ್ನ ಶೆರಗನು
ಬಾಲಕೃಷ್ಣಾ ।
ಉಡುಗಿ ದೇವರ
ಮನಿ ಬರುವೆ ಬೇಗ ।। ಪಲ್ಲವಿ ।।
ಅಂಗಳ ಥಳಿ ಹಾಕಿ ।
ರಂಗವಲ್ಲಿಯ ಹಾಕಿ ।
ತಂಗಳ ಮೊಸರನ್ನಾ ।
ಕಡೆಯಲ್ಹಾಕಿ ।।
ಬಂಗಾರದ ಬಟ್ಟಲೊಳು ।
ರಂಗ ಬೆಣ್ಣೆಯನೀವೆ ।
ಕಂಗಳನೆ ತೆಗಿ ಬೀರು ।
ಮಂಗಳವಾ ।। ಚರಣ ।।...
ಅಂದ ಮಾತನು ಕೇಳಿ ಆ ।
ಕಂದ ಎತ್ತಿಕೋ ಎನ್ನ ।
ಒಂದು ಬಟ್ಟಲದೊಳಗೆ ।।
ತಂದುಕೊಡು ಆಡುವೆ ।
ಎಂದು ತಾಯಿ ಚಿನ್ನಾ ।
ಹಿಂದೆ ಸೆರಗಪಿಡಿದು
ಇಂದಿರೇಶ ।। ೫ ।।
*
" ಶ್ರೀ ಇಂದಿರೇಶ - 3 "
" ಶ್ರೀ ತಿರುಪತಿ ತಿಮ್ಮಪ್ಪನ - ಶ್ರೀ ಮಂಚಾಲೆ ರಾಘಪ್ಪನ ಅಂತರಂಗ ಭಕ್ತರು ಶ್ರೀ ಇಂದಿರೇಶರು "
" ಕೃತಿ ರಚನೆ "
ಪೂಜ್ಯ ಶ್ರೀ ಆಚಾರ್ಯರು ತಪಸ್ವಿಗಳಿದ್ದಂತೆ - ಮಹಾ ಪಂಡಿತರೂ ಆಗಿದ್ದರು.
ಕನ್ನಡ - ಸಂಸ್ಕೃತ ಎರಡರಲ್ಲಿಯೂ ಸರಸ ಸುಂದರ ಕೃತಿಗಳನ್ನೂ - ಪ್ರೌಢ ಪ್ರಬಂಧಗಳನ್ನೂ ನಿರ್ಮಿಸುವ ನೈಪುಣಿಯು ಅವರಿಗೆ ಸ್ವಾಧೀನವಾಗಿತ್ತು.
ಪೂಜ್ಯ ಶ್ರೀ ಆಚಾರ್ಯರು - ಶ್ರೀ ಶ್ರೀನಿವಾಸನ ಪ್ರಸಾದಾಂಕಿತವಾದ " ಇಂದಿರೇಶ " ಅಂಕಿತದಲ್ಲಿ ಪದ ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ತಮ್ಮ ವಿಶಿಷ್ಟವಾದ ಕೊಡುಗೆಯೊಂದಿಗೆ ಶ್ರೀಮಂತಗೊಳಿಸಿದ್ದಾರೆ.
" ಶ್ರೀಮದ್ಭಾಗವತ ಮಹಾ ಪುರಾಣವನ್ನು ಕನ್ನಡ ಪದ್ಯ ಬದ್ಧವಾಗಿ ಭಾಷಾಂತರಿಸಿದ್ದಾರೆ.
" ಸಂಸ್ಕೃತ ಗ್ರಂಥಗಳು "
1. ತಂತ್ರಸಾರೋಕ್ತ ಪೂಜಾ ಪದ್ಧತಿ
2. ಬ್ರಹ್ಮಸೂತ್ರ ಪ್ರಮೇಯ ಮಾಲಾ
3. ಸರ್ವ ಮೂಲ ಟಿಪ್ಪಣಿ
4. ಶ್ರೀ ಜಯತೀರ್ಥ ಟೀಕಾ ಪುಂಜ ಟಿಪ್ಪಣಿ
ಕೊನೆಯ ಎರಡು ಗ್ರಂಥಗಳಲ್ಲಿ ಪೂಜ್ಯ ಶ್ರೀ ಆಚಾರ್ಯರು ತಮ್ಮದೇ ಆದ ಒಂದು ವಿಶಿಷ್ಟವಾದ ಕ್ರಮವನ್ನು ಅನುಸರಿಸಿದ್ದಾರೆ.
ಶ್ರೀಮನ್ಮಧ್ವಾಚಾರ್ಯರ ಮತ್ತು ಶ್ರೀ ಜಯತೀರ್ಥರ ಗ್ರಂಥದ ಮೇಲೆ ಅವರ ಕಾಲದ ವರೆಗೆ ಆಗಿಹೋದ ಎಲ್ಲಾ ಟೀಕಾ ಟಿಪ್ಪಣಿಗಳ ವಿಷಯಗಳನ್ನು ಕ್ರೋಢೀಕರಿಸಿ ಮೂಲಾನುಗುಣವಾಗಿ ಯೋಜನೆ ಮಾಡುತ್ತಾರೆ.
ಶ್ರೀ ರಾಯರ ಮಠದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ಸುಮತೀಂದ್ರ ತೀರ್ಥರು " ಭಾವರತ್ನ ಕೋಶ Digist " ಮಾದರಿಯ ವಿಷಯ ಸಂಕಲನಾತ್ಮಕ ಪದ್ಧತಿಯನ್ನು ಪೂಜ್ಯ ಶ್ರೀ ಆಚಾರ್ಯರು ಪುನರುಜ್ಜೀವನಗೊಳಿಸಿದ್ದಾರೆ.
ಪೂಜ್ಯ ಶ್ರೀ ಆಚಾರ್ಯರ ಗ್ರಂಥಗಳು ಇಂದಿಗೂ ಅವರ ವಂಶಸ್ಥರ ಮನೆಯಲ್ಲಿ ಸುರಕ್ಷಿತವಾಗಿವೆ.
" ಶ್ರೀ ಇಂದಿರೇಶರು ತಮ್ಮ ಇಷ್ಟ ಗುರುಗಳಾದ ಶ್ರೀ ರಾಯರ ಮೇಲೆ ರಚಿಸಿದ ಸ್ತೋತ್ರ "
ರಚನೆ :
ಶ್ರೀ ಹುಚ್ಚಾಚಾರ ಪಾಂಡು ರಂಗಿ
ಅಂಕಿತ : ಇಂದಿರೇಶ
ಬಾರೋ ನಮ್ಮ ಮನೆಗೆ
ಶ್ರೀ ಗುರುವರ ।। ಪಲ್ಲವಿ ।।
ಬಾರೋ ನಮ್ಮನೆಗೀ -
ರಸಮಯ ವಿಚಾರ ।
ಪರ ಸಕಳಾರ್ಯ -
ಸೇವಿತ ।। ಅ ಪ ।।
ರಾಮ ಲಕ್ಷ್ಮಣ
ಕಾಮಿನಿ ಶ್ರಿತ ಕಾಮ ।
ಮಳಾತ್ಮ ಸುಧಾಮ
ರಾಜಿತ ।। ಚರಣ ।।
ಎಷ್ಟೋ ಮಾನವ-
ರೆಷ್ಟೋ ಸೇವಿಸು ।
ತುಷ್ಟ ಭೂತಿ ವಿ-
ಶಿಷ್ಟ ರಾದರೂ ।। ಚರಣ ।।
ಸೌಧ ಭಾವ ವಿ-
ಬೋಧ ಪರಿಮಳ ।
ಸಾದಿ ಭೂಪ ಪ್ರ-
ಸಾದ ಪೂರಿತ ।। ಚರಣ ।।
ನಿಮ್ಮ ದರ್ಶನ
ಶರ್ಮ ಸಾಧನ ।
ಧರ್ಮ ಮಮ ಪ್ರತಿ
ಜನ್ಮನಿಸ್ಯಾತ್ ।। ಚರಣ ।।
ಬಂದು ನೀ ನಮಾ-
ಗೆಂದು ಕೇಳಿದೆ ।
ಇಂದಿರೇಶನ
ತಂದು ತೋರಿಸು ।। ಚರಣ ।।
***
ಮುನಿಯ ನೋಡಿದಿರಾ
ಮಾನವರಾ ।। ಪಲ್ಲವಿ ।।
ಮಾಡಿರಿ ಪೂಜೆಯನು
ನೀಡಿರಿ ಭಿಕ್ಷವನು ।
ರೂಡಿಯೊಳಗೆ ಇವ
ಗೂಢ ದೇವಾಂಶನು ।। ಚರಣ ।।
ಬೆಳ ಗಿರಿ ಆರುತಿಯ
ಸುಲಲಿತ ಕೀರುತಿಯ ।
ಇಳೆಯೊಳು ಪಾಡಿರಿ
ಚೆಲುವ ಸಂನ್ಯಾಸಿಯ ।। ಚರಣ ।।
ಶ್ರೀಶನ ತೋರುವನು
ದೋಷವ ಕಳೆಯುವನು ।
ದಾಸ ಜನರಿಗೆ ಇಂದೀ-
ರೇಶ ಸುಪ್ರಿಯನು ।। ಚರಣ ।।
ಶ್ರೀ ಇಂದಿರೇಶರು ಶ್ರೀ ರಾಯರ ಮೇಲೆ ಸುಮಾರು 20 ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ಇಂದಿರೇಶರಲ್ಲಿ ನಾದಿಷ್ಠತೆ, ಛಾ೦ದಿಷ್ಟತೆ, ರಾಗಿಷ್ಠತೆಗಳು ಭಗವನ್ನಿಷ್ಟೆಯೊಡನೆ ಬೆರೆತು ಮಿಶ್ರ ಮಾಧುರಿಯ ಅಪೂರ್ವ ಮಾದರಿಯನ್ನು ಒದಗಿಸಿದೆ.
ಸುಮಾರು 100 ಕ್ಕೂ ಅಧಿಕ ಪದ - ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ರುಕ್ಮಿಣೀ ಜನನೀಯಸ್ಯ/ ಶ್ರೀನಿವಾಸಸ್ತು ಯತ್ಪಿತಾ/
ಯೋ ಪಾಂಡುರಂಗೀ ವಂಶೀಯಃ/ ತಂ ವಂದೇ ಸದ್ಗುರುಂ ಮಮ//
ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದ,
ಶ್ರೀ ಕೃಷ್ಣನನ್ನು ಮಗುವಂತೆ ಪ್ರತೀದಿನ ಕಾಣಿದಂತಹಾ, ಮಹಾಲಕ್ಷ್ಮೀ ದೇವಿಯರನ್ನು ಒಲಿಸಿಕೊಂಡಂತಹಾ, ಶ್ರೀನಿವಾಸದೇವರ ಕಲ್ಯಾಣವನ್ನು ಸದಾ ಬಿಡದೇ ಮಾಡಿದಂತಹಾ, ನರಸಿಂಹ ದೇವರ ಆರಾಧನೆ ಸದಾ ಮಾಡಿದವರಾದ, ಮಾನಸಪೂಜಾವಿಧಾನ,ತತ್ವ ಸಂಖ್ಯಾನದ ಸ್ತೋತ್ರ, ಪಾಪಪುರುಷ ವಿಸರ್ಜನೆ,ಅಧಿಷ್ಟಾನಗತ ಭಗವದ್ರೂಪಗಳ ವರ್ಣನೆ, ಪುರಂದರದಾಸಾರ್ಯರ ಸ್ತುತಿ, ಇತ್ಯಾದಿ ಶ್ರೇಷ್ಠ ಕೃತಿಗಳಿಂದ ದಾಸ ಸಾಹಿತ್ಯ ಸೇವೆಯನ್ನು ಇನ್ನೂ ಅನೇಕ ಅದ್ಭುತ ಪದ ಪದ್ಯಗಳ, ಸ್ತೋತ್ರಗಳನ್ನು ಸಂಸ್ಕೃತ ಭಾಷೆಯಲ್ಲಿ, ಪ್ರಾಕೃತದಲ್ಲಿ ನಮಗೆ ನೀಡಿದಂತಹಾ ನಾರದರಿಂದ, ಸ್ವಪ್ನದಲ್ಲಿ ಅಂಕಿತಪಡೆದ ದಾಸ ಶ್ರೇಷ್ಠರಾದ ಇಂದಿರೇಶ ಅಂಕಿತಸ್ಥರಾದ ಶ್ರೀ ತಿರುಪತಿ ಪಾಂಡುರಂಗೀ ಹುಚ್ಚಾಚಾರ್ಯರ ಆರಾಧನಾ ಮಹೋತ್ಸವ
Comments
Post a Comment