ಕಾಶಿ ವಾಸಿಗಳಾಗಿ ಕಾಶಿಪುರಾಧೀಶನ ವಿಶೇಷ ಸೇವೆಯ ಹಲವು ವತ್ಸರ ಮಾಡುತ ವಿರಾಗಿ ಮಾಧವೇಶಾಚಾರ್ಯರ ಮುದದಿಂದ ಸೇವಿಸಿ ಪರಿಪರಿಯ ಕರುಣ ಪಡೆದಂಥ ಸತ್ಯಕಾಮ ಜಾಬಾಲಿಯೆ ನಿನ್ನ ಗೋ ಸೇವೆಯಿಂದ ಪ್ರೀತರಾಗಿ ಸುರರು ಬೋಧಿಸಿದರು ಬ್ರಹ್ಮಜ್ಞಾನವನು ಎಂದು ಸ್ತುತಿಸಲ್ಪಟ್ಟವರು, ಶ್ರೀ ರಾಯರ, ಶ್ರೀ ವಿಜಯಪ್ರà²ುಗಳ ಅನುಗ್ರಹ ಪಡೆದು ಜ್ಞಾನಚಕ್ಷುಗಳಿಂದಲೇ ಪರಮಾತ್ಮನನ್ನು ಕಂಡ ಪರಮ ಚೇತನರು, ೨೪ ವರ್ಷಗಳ ಕಾಲ ಕಾಶಿಯಲ್ಲಿ ನೆಲಸಿ ಶ್ರೀ ರಾಮದುರ್ಗ ಮಾಧವೇಶಾಚಾರ್ಯರಿಂದ ಅನುಗ್ರಹಿಸಲ್ಪಟ್ಟು ಅವರಿಂದ ಶ್ರೀಮದ್à²ಾಗವತದ ಶ್ರವಣವನ್ನು ಮಾಡಿದ ಪರಮà²ಾಗವತರು. ಹರಿದಾಸ ಸಾಹಿತ್ಯದ ಸೆವೆಗೆ, ಹರಿದಾಸರ ಸೇವೆಗೆ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟವರು, ಶ್ರೀ ಮೊದಲಕಲ್ ಶೇಷದಾಸಾರ್ಯರ ಆರಾಧನೆಯಲ್ಲಿ à²à²•್ತಿಯಿಂದ à²ಾಗವಹಿಸಿ ಸೇವೆ ಸಲ್ಲಿಸುತ್ತಿರುವ ಮಹಾನುà²ಾವರು, ಅನೇಕ ಶಿಷ್ಯವರೇಣ್ಯರಿಗೆ ಅನುಗ್ರಹಮಾಡಿದವರು, ಪರಮಾತ್ಮನ ಸೇವೆಗೆ ದೇಹದ ಲೋಪಗಳು ಬಂಧಕಗಳಲ್ಲವೆಂದೇ ತೋರಿಸಿಕೊಡುವಂತೆ ಜೀವನವನ್ನು ನಡೆಸಿದ ಮಹಾನುà²ಾವರಾದ , ಇಂದಿನ ಆರಾಧನಾನಾಯಕರಾದ ಶ್ರೀ ಕಾಶೀದಾಸರಿಗೆ ಶಿರಬಾಗಿ ನಮಸ್ಕಾರಗಳನ್ನು ಸಲ್ಲಿಸುತ್ತೆವೆ
Sarvadarshi Tarang